ಪ್ರೇಮ ವಿಫಲವಾಗಿ… ಮನಸು ವಿಕಲವಾಗಿ…ಸೂಸೈಡ್ ಸೆಲ್ಫೀ ನಮ್ಮ ರಾಜ್ಯದ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿಯಲ್ಲಿ ಮಂಗಳವಾರ ಈ ವಿಷಾಯನೀಯ ಘಟನೆ ನಡೆದಿದೆ.

ತುಂಬು ನೂರು ವರ್ಷ ಜತೆಯಾಗಿ ಇರೋಣ ಎಂದು ಭರವಸೆ ನೀಡಿದ ಪ್ರೇಯಸಿ ಕಡೆಗೆ ಕೈಕೊಟ್ಟ ಕಾರಣ ಓರ್ವ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಗುತ್ತಾ ವಿಷ ಗುಳಿಗೆ ನುಂಗುತ್ತಾ ಸೆಲ್ಫೀ ವೀಡಿಯೋ ತೆಗೆದುಕೊಂಡಿದ್ದು ಅದು ವೈರಲ್ ಆಗಿದೆ. ನಮ್ಮ ರಾಜ್ಯದ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿಯಲ್ಲಿ ಮಂಗಳವಾರ ಈ ವಿಷಾಯನೀಯ ಘಟನೆ ನಡೆದಿದೆ.

ಆನೂರು ಗ್ರಾಮಪಂಚಾಯಿತಿ ಗ್ರಾಮಕ್ಕೆ ಸೇರಿದ ಸುನಿಲ್ ಕುಮಾರ್ (21) ಬೆಂಗಳೂರಿನಲ್ಲಿ ಹೋಂಗಾರ್ಡ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ. ಎರಡು ದಿನಗಳ ಹಿಂದೆ ತನ್ನ ಗ್ರಾಮಕ್ಕೆ ಬಂದ ಆತ ನೋವಿನಿಂದ ಕಾಣಿಸಿದ. ಬಳಿಕ ವಿಷ ಗುಳಿಗೆಗಳನ್ನು ನುಂಗುತ್ತಾ ವೀಡಿಯೋ ತೆಗೆದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

watch video :

ಏನೇನೂ ಆಗದಂತೆ ಆತ ವೀಡಿಯೋದಲ್ಲಿ ಕಾಣಿಸಿಕೊಂಡಿದ್ದಾನೆ. ಈ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಜೀವನದಲ್ಲಿ ಪ್ರೀತಿ ಒಂದು ಭಾಗ ಮಾತ್ರ ಎಂದು, ಪ್ರೀತಿ ವಿಫಲವಾದರೆ ಆತ್ಮಹತ್ಯೆ ಮಾಡಿಕೊಳ್ಳಬಾರದೆಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

SHARE