ನಿಮ್ಮ ದೌರ್ಭಾಗ್ಯ ದೂರ ಆಗಬೇಕೆಂದರೆ ಶನಿ ಜಯಂತಿಯಂದು ಈ ನಾಮಸ್ಮರಣೆ ಮಾಡಿದರೆ ಸಾಕು..!!

ಜೇಷ್ಠ ಮಾಸದ ಅಮಾವಾಸ್ಯೆಯಂದು ಶನಿ ಜಯಂತಿ ಆಚರಿಸಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿಯನ್ನು ನ್ಯಾಯ ದೇವತೆ ಎಂದು ನಂಬಲಾಗಿದೆ. ಮನುಷ್ಯ ಯಾವುದೇ ಕೆಟ್ಟ ಹಾಗೂ ಒಳ್ಳೆ ಕೆಲಸ ಮಾಡಿದ್ರೂ ಅದ್ರ ಫಲವನ್ನು ಶನಿ ದೇವ ನೀಡ್ತಾನೆ ಎನ್ನಲಾಗಿದೆ.

ಶನಿ ಧನರಾಶಿಗೆ ಪ್ರವೇಶ ಮಾಡಿರುವುದ್ರಿಂದ ಸೆಪ್ಟೆಂಬರ್ 6 ರವರೆಗೆ ಸಾಕಷ್ಟು ಸಮಸ್ಯೆಗಳು ಎದುರಾಗಲಿವೆ. ಶನಿ ವಕ್ರವಾಗಿರುವ ಕಾರಣ ಯಾವ ರಾಶಿಯವರು ಸಾಡೇ ಸಾಥ್ ಸಮಸ್ಯೆಯಿಂದ ಬಳಲುತ್ತಿದ್ದಾರೋ ಅವ್ರ ಸಮಸ್ಯೆ ಇನ್ನಷ್ಟು ಹೆಚ್ಚಾಗಲಿದೆ.

ಹೌದು, ವೃಶ್ಚಿಕ, ಧನು ಹಾಗೂ ಮಕರ ರಾಶಿಯ ಮೇಲೆ ಸಾಡೇ ಸಾಥ್ ಪ್ರಭಾವವಿದೆ. ಶನಿ ಜಯಂತಿಯಂದು ಜನರು ಈ ಕೆಲಸ ಮಾಡಿದ್ರೆ ಶನಿ ಪ್ರಭಾವ ಕಡಿಮೆಯಾಗಲಿದೆ. ಶನಿ ದೇವರ ಕೃಪೆಗೆ ಪಾತ್ರರಾಗಲು ದೇವಸ್ಥಾನಕ್ಕೆ ಹೋಗಿ, ವೃತ, ಉಪವಾಸ ಮಾಡಿ ಆರಾಧನೆ ಮಾಡಬೇಕೆಂದೇನಿಲ್ಲ.

ಶನಿದೇವನ ಪತ್ನಿಯರ ನಾಮವನ್ನು ಪಠಿಸಬೇಕು. ಇದ್ರಿಂದ ದುಃಖ ದೂರವಾಗಿ ಅದೃಷ್ಟ ಒಲಿದು ಬರುತ್ತದೆ. ಶನಿ ಜಯಂತಿಯೊಂದೇ ಅಲ್ಲ ಪ್ರತಿ ದಿನ ಶನಿದೇವರ ನಾಮಸ್ಮರಣೆ ಮಾಡುವುದು ಒಳ್ಳೆಯದು.

SHARE