ಪ್ರಥಮ ರಾತ್ರಿಯಂದೇ ಮಡದಿಯನ್ನು ಪರಲೋಕಕ್ಕೆ ಕಳುಹಿಸಿದ ಪತಿರಾಯ… ಯಾಕೆಂದು ಗೊತ್ತಾ…?

ಮಾಂಗಲ್ಯಕ್ಕೆ ಮೂರು ಗಂಟು ಬಿದ್ದಾಯ್ತು. ಇನ್ನು ಮುಂದೆ ಆತನೇ ತನ್ನ ಸರ್ವಸ್ವ ಎಂದು ಕೊಂಡಳು. ತನ್ನ ಭವಿಷ್ಯತ್ತನ್ನು ನೆನೆಸಿಕೊಳ್ಳುತ್ತಾ… ಹಾಲಿನ ಲೋಟದೊಂದಿಗೆ ಪ್ರಸ್ಥದ ಕೋಣೆಗೆ ಪ್ರವೇಶಿಸಿದಳು. ತನ್ನ ಹೊಸ ಜೀವನದ ಬಗ್ಗೆ ಬಹಳಷ್ಟು ಆಸೆ ಆಕಾಂಕ್ಷೆಗಳನ್ನು ಮನಸ್ಸಿನಲ್ಲಿ ತುಂಬಿಕೊಂಡಿದ್ದಳು. ಆದರೆ… ತನ್ನ ಗಂಡನೇ ತನ್ನ ಪಾಲಿನ ಯಮನಾಗುತ್ತಾನೆಂದು ಆಕೆ ಕನಸಿನಲ್ಲಿಯೂ ಊಹಿಸಿರಲಿಲ್ಲ.


ಪ್ರಸ್ಥದ ದಿನವೇ ಘನಘೋರವಾಗಿ ಆತ ಆಕೆಯನ್ನು ಪರಲೋಕಕ್ಕೆ ಕಳುಹಿಸಿದ.

ಆಕೆಯ ಹೆಸರು ಅನೂಷ. ವಯಸ್ಸು 26 ವರ್ಷ. ಮದುವೆಗೂ ಮುಂಚೆ ಆಕೆ ಒಬ್ಬನನ್ನು ಪ್ರೀತಿಸುತ್ತಿದ್ದಳು. ಆದರೆ, ಕಾರಣಾಂತರಗಳಿಂದ ಬೇರೆಯಾಗಬೇಕಾಯ್ತು. ನಂತರದ ದಿನಗಳಲ್ಲಿ ಒಂದು ಒಳ್ಳೆಯ ಸಂಬಂಧವನ್ನು ನೋಡಿ ಅನೂಷಳಿಗೆ ಮದುವೆ ಮಾಡಿದರು.


ಅನೂಷಳ ಮದುವೆ ವೆಂಕಟೇಶ್ವರುಲುನೊಂದಿಗೆ ನೆರವೇರಿತು. ಮದುವೆಯ ನಂತರ ನಡೆಯುವ ಪ್ರಸ್ಥದ ಶಾಸ್ತ್ರದಲ್ಲಿ… ವೆಂಕಟೇಶ್ವರುಲು ತಮಾಷೆಗೆಂದು ಅನೂಷಳ ಬಗ್ಗೆ ಹೇಳೆಂದ. ಎಂತಹುದೇ ವಿಷಯವನ್ನು ಹೇಳಿದರೂ ತಾನದನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುವುದಿಲ್ಲವೆಂದೂ ತಿಳಿಸಿದ.ಸ ಭವಿಷ್ಯತ್ತಿನಲ್ಲೂ ಸಹ ಎಂತಹುದೇ ತೊಂದರೆ ಬಾರದಂತೆ ನೋಡಿಕೊಳ್ಳುತ್ತೇನೆಂದ.ಆತನ ಮಾತುಗಳನ್ನು ನಂಬಿದ ಅನೂಷ, ತನ್ನ ಬಾಲ್ಯದಿಂದ ಹಿಡಿದು ತಾನು ಪ್ರೀತಿಸಿದ ಹುಡುಗನ ಬಗ್ಗೆ ಹಾಗೂ ತಾವಿಬ್ಬರೂ ಬೇರ್ಪಟ್ಟ ವಿಷಯವನ್ನೂ ವಿವರವಾಗಿ ತನ್ನ ಗಂಡನಿಗೆ ಹೇಳಿದಳು.

ಇದನ್ನು ಕೇಳಿದ ವೆಂಕಟೇಶ್ವರುಲು ಉಗ್ರನಾದ. ತನ್ನಲ್ಲಿದ್ದ ರಾಕ್ಷಸತ್ವವನ್ನು ತೋರಿಸಿಯೇ ಬಿಟ್ಟ. ಅತಿಯಾದ ಕೋಪದಿಂದ ಅನೂಷಳ ಕತ್ತು ಹಿಸುಕಿ ಸಾಯಿಸಿಯೇ ಬಿಟ್ಟ.ಇಷ್ಟವಿಲ್ಲದಿದ್ದರೆ ಅನೂಷಳನ್ನು ಅವಳ ಪಾಡಿಗೆ ಬಿಟ್ಟಿದ್ದರೂ, ಇಲ್ಲವೇ ವಿಚ್ಛೇದನ ಪಡೆದುಕೊಂಡಿದ್ದರೂ ಹೇಗೋ ಬದುಕು ಸಾಗಿಸುತ್ತಿದ್ದಳು. ಆದರೆ, ತನ್ನಲ್ಲಿರುವ ರಾಕ್ಷಸತ್ವವನ್ನು ತೋರಿಸಿ ತುಂಬು ಜೀವವನ್ನು ಬಲಿತೆಗೆದುಕೊಂಡಿದ್ದ.

SHARE