ಸೃಜನ್ ಮಾಡ್ತಿರೋ ಪರಿಸರ ಕಾಳಜಿ ಬಗ್ಗೆ ತಿಳಿದುಕೊಳ್ಳಿ

ಸೃಜನ್ ಲೋಕೇಶ್ ಅಂದ ತಕ್ಷಣ ಮೊದಲಿಗೆ ನೆನಪಾಗುವುದು ಮಜಾ ಟಾಕೀಸ್, ವಾರದ ಅಂತ್ಯದಲ್ಲಿ ಕಲರ್ಸ್ ಕನ್ನಡ ದಲ್ಲಿ ಪ್ರಸಾರವಾಗುತಿದ್ದ ಮಜಾ ಟಾಕೀಸ್ ಈಗ ಕಲರ್ಸ್ ಸೂಪರ್ ನಲ್ಲಿ ಗುರುವಾರ ಮತ್ತು ಶುಕ್ರವಾರ ಮೂಡಿಬರುತ್ತಿದೆ. ಮನೆ ಮಂದಿ ಎಲ್ಲರೂ ಕೂತು ನೋಡುವಂತ ಕಾರ್ಯಕ್ರಮವನ್ನ ನೆಡಿಸಿಕೊಡುವ ಸೃಜನ್ ಸಾಕಷ್ಟು ವರ್ಷಗಳಿಂದ ಕನ್ನಡ ಸಿನಿಮಾರಂಗಕ್ಕೂ ಹಾಗೂ ಅಭಿಮಾನಿಗಳಿಗೂ ಚಿರಪರಿಚಿತರು.

ಸುಬ್ಬಯ್ಯ ನಾಯ್ಡು ಕುಟುಂಬದ ಕುಡಿಯಾಗಿರುವ ಸೃಜನ್ ದಿವಂಗತ ನಟ ಲೋಕೇಶ್ ಅವರ ಪುತ್ರ.
ಅಪ್ಪನ ಹೆಸರಿನಲ್ಲಿ ಮಾಡುತ್ತಿರುವ ಕೆಲಸಗಳು ಅದೆಷ್ಟೋ ಜನರಿಗೆ ಗೊತ್ತಿಲ್ಲ. ಟಾಕಿಂಗ್ ಸ್ಟಾರ್ ಅಂತಾನೇ ಪೇಮಸ್ ಆಗಿರುವ ಸೃಜನ್ ಯಾರಿಗೂ ತಿಳಿಯದಂತೆ ಮುಂದಿನ ಯುವ ಪೀಳಿಗೆಗೆ ಅನುಕೂಲವಾಗುವಂತಹ ಕೆಲಸವನ್ನು ಮಾಡುತ್ತಿದ್ದಾರೆ.

ಸದಾ ಬ್ಯುಸಿ ಆಗಿರುತ್ತೇನೆ ಎನ್ನುವ ಕೆಲಸಗಳ ಮಧ್ಯೆ ಸೃಜ ನೂರಾರು ಜನರಿಗೆ ಮಾದರಿ ಆಗಿ ನಿಲ್ಲುತ್ತಾರೆ. ಲೋಕೇಶ್ ಹೆಸರು ಸೃಜನ್ ರಿಂದ ಹಸಿರು ಅಪ್ಪನ ಹೆಸರು ಬಳಸುವವನು ಮಗ ನಲ್ಲ, ಅಪ್ಪನ ಹೆಸರು ಉಳಿಸುವವನು ಮಗ ಎನ್ನುವ ಮಾತಿದೆ. ಅದಕ್ಕೆ ತಕ್ಕ ಉದಾಹರಣೆ ಸೃಜನ್ ಲೋಕೇಶ್, ಸೃಜನ್ ಇಲ್ಲಿವರೆಗೂ ಎಂದಿಗೂ ನಾನು ಇಂತವರ ಮೊಮ್ಮಗ ಅಥವಾ ಲೋಕೇಶ್ ಅವರ ಮಗ ಎನ್ನುವುದನ್ನ ಎಲ್ಲಿಯೂ ತೋರ್ಪಡಿಸಿಕೊಂಡಿಲ್ಲ. ಇಡೀ ಚಿತ್ರರಂಗವೇ ಒಂದು ಕಡೆ ಈಜುತ್ತಿದ್ದರೆ ಸೃಜ ಮಾತ್ರ ಬೇರೆಯದ್ದೇ ದಾರಿ ತುಳಿದು ಅಭಿಮಾನಿಗಳನ್ನ ಪಡೆದುಕೊಂಡವರು.

ಕಾರ್ಯಕ್ರಮದ ಜೊತೆ ಪರಿಸರ ಕಾಳಜಿ ಲೋಕೇಶ್ ಅವರ ಹೆಸರಿನಲ್ಲಿ ನಿರ್ಮಾಣ ಸಂಸ್ಥೆ ಹುಟ್ಟುಹಾಕಿದ ನಟ ಸೃಜನ್ ಅಂದೇ ಒಳ್ಳೆ ಕೆಲಸಕ್ಕೆ ಚಾಲನೆ ನೀಡಿದರು. ನಿರ್ಮಾಣ ಸಂಸ್ಥೆಯಲ್ಲಿ ಯಾವುದೇ ಕಾರ್ಯಕ್ರಮ ನಡೆದರು ಅಲ್ಲಿಗೆ ಬರುವ ಪ್ರತಿಯೊಬ್ಬರಿಗೂ ಗಿಡಗಳನ್ನ ಉಡುಗೊರೆಯಾಗಿ ಕೊಡಲು ಆರಂಭಿಸಿದರು.ಕಲಾವಿದರಲ್ಲಿ ಪರಿಸರ ಕಾಳಜಿ ಮಜಾ ಟಾಕೀಸ್ ಒಂದರಲ್ಲೇ ಸೃಜನ್ ಸುಮಾರು 1500 ಕ್ಕೂ ಹೆಚ್ಚು ಗಿಡಗಳನ್ನ ವಿತರಣೆ ಮಾಡಿದ್ದಾರೆ.

ಔಷಧಿಗೆ ಉಪಯೋಗ ಆಗುವಂತಹ, ಹೂ ಮತ್ತು ಹಣ್ಣುಗಳನ್ನ ಬಿಡುವ ಸಸಿಗಳನ್ನ ನೀಡಲಾಗುತ್ತಿದೆ. ಈ ಮೂಲಕ ಪ್ರೇಕ್ಷಕರ ಹಾಗೂ ಕಲಾವಿದರಿಗೆ ಪರಿಸರದ ಬಗ್ಗೆ ಕಾಳಜಿ ಉಂಟು ಮಾಡುವಂತಾಗುತ್ತದೆ. ಇದರಿಂದ ಪ್ರೇರೇಪಿತರಾಗಿ ನೋಡುಗರು ಮಜಾ ಟಾಕೀಸ್ ಕಾರ್ಯಕ್ರಮಕ್ಕೆ ಸಾಕಷ್ಟು ಜನ ಅಭಿಮಾನಿಗಳಿದ್ದಾರೆ. ಅವರೆಲ್ಲರೂ ತಮ್ಮ ಮನೆಯ ಮದುವೆ, ಸಮಾರಂಭಗಳಲ್ಲಿ ತೆಂಗಿನ ಕಾಯಿಯ ಬದಲು ಗಿಡಗಳನ್ನ ನೀಡುವ ಅಭ್ಯಾಸ ಮಾಡಿಕೊಂಡಿರುವುದ ಸೃಜನ್ ಅವರಿಗೆ ಖುಷಿ ತಂದಿದೆ.

SHARE