ಚಿತ್ರೀಕರಣದ ಮೊದಲ ದಿನವೇ ಪೈಲ್ವಾನ್ ಚಿತ್ರಕ್ಕೆ ಸಿಕ್ತು ಭರ್ಜರಿ ರೆಸ್ಪೋನ್ಸ್

ಪೈಲ್ವಾನ್ ಚಿತ್ರವೂ ಘೋಷಣೆಯಾದ ದಿನದಿಂದಲೂ ಸಹ ಸಾಕಷ್ಟು ಸದ್ದು ಮಾಡುತ್ತಿದ್ದು, ಚಿತ್ರೀಕರಣದ ಆರಂಭದ ದಿನವೇ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಹೌದು, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ಚಿತ್ರೀಕರಣ ಶುರುವಾಗಿದ್ದು, ಚಿತ್ರದ ಮತ್ತೊಂದು ಪ್ರಮುಖ ಪಾತ್ರದಲ್ಲಿ ಅಭಿನಯಿಸಲಿರುವ ಸುನೀಲ್ ಶೆಟ್ಟಿ ಕಿಚ್ಚ ಸುದೀಪ್ ಬಗ್ಗೆ ಟ್ವೀಟ್ ಮಾಡುವ ಮೂಲಕ ಚಿತ್ರವೂ ರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿರುವುದನ್ನು ಕಾಣಬಹುದು.

ಪೈಲ್ವಾನ್ ಸಿನಿಮಾದ ಚಿತ್ರೀಕರಣ ಶುರುವಾದ ತಕ್ಷಣವೇ ನಟ ಸುನೀಲ್ ಶೆಟ್ಟಿ ಚಿತ್ರದ ಬಗ್ಗೆ ಟ್ವಿಟ್ ಮಾಡಿದ್ದಾರೆ. “ಅಂತು ನನ್ನ ಜನ್ಮಭೂಮಿಯ ಚಿತ್ರರಂಗದಲ್ಲಿ ನಾನು ಮೊದಲ ಚಿತ್ರದಲ್ಲಿ ಅಭಿನಯ ಮಾಡುತ್ತಿದ್ದೇನೆ” ಎಂದು ಖುಷಿಯನ್ನು ಹಂಚಿಕೊಂಡಿದ್ದಾರೆ. ಸಿನಿಮಾದಲ್ಲಿ ಭಾಗಿ ಆಗುವುದರ ಬಗ್ಗೆ ಟ್ವಿಟ್ ಮಾಡಿರುವ ಸುನೀಲ್ ಶೆಟ್ಟಿ ತಮ್ಮ ಲಿಟಲ್ ಸಹೋದರ ಸುದೀಪ್ ಜೊತೆ ಕೆಲಸ ಮಾಡಲು ಕಾತುರನಾಗಿದ್ದೇನೆ ಎನ್ನುವುದನ್ನು ತಿಳಿಸಿದ್ದಾರೆ.

ಚುನಾವಣೆಯ ದಿನವೇ ಚಿತ್ರೀಕರಣಕ್ಕಾಗಿ ಚೆನೈ ಪ್ರವಾಸ ಮಾಡಿದ ಸಿನಿಮಾ ತಂಡ ಚಿತ್ರೀಕರಣ ಶುರು ಮಾಡಿದ ದಿನವೇ ಹೊಸ ಟ್ರೆಂಡ್ ಸೆಟ್ ಮಾಡಿರುವುದನ್ನು ನಾವು ಗಮನಿಸಬಹುದಾಗಿದೆ.

ಈ ಬಹುನಿರೀಕ್ಷಿತ ಸಿನಿಮಾದ ಬಗ್ಗೆ ಆರಂಭದಿಂದಲೂ ಸಾಕಷ್ಟು ಕುತೂಹಲಗಳಿದ್ದು, ಅದರಂತೆಯೇ ಇಂದು ಚಿತ್ರೀಕರಣ ಆರಂಭ ಆದಾಗಲೇ ಟ್ವಿಟ್ಟರ್ ನಲ್ಲಿ ಪೈಲ್ವಾನ್ ಟ್ರೆಂಡ್ ಸೆಟ್ ಮಾಡಿರುವುದು ಖುಷಿಯ ವಿಚಾರ. ಕೃಷ್ಣ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದು ಸಣ್ಣದೊಂದು ದೃಶ್ಯದಲ್ಲಿ ಸುದೀಪ್ ಇಂದು ಭಾಗಿ ಆಗಿರುವುದಾಗಿ ತಿಳಿಸಿದ್ದಾರೆ.

SHARE