ತಾಯಿಯ ಶವವನ್ನು ಎರಡು ವರ್ಷಗಳಿಂದಲೂ ಫ್ರಿಜ್ ನಲ್ಲಿ ಬಚ್ಚಿಟ್ಟು… ಆಕೆಯ ಬೆರಳುಗಳ ಮುದ್ರೆಯಿಂದ ಏನು ಮಾಡುತ್ತಿದ್ದನೆಂದರೆ…!

ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಒಂದು ವಿಶಿಷ್ಟ ಘಟನೆ ಬೆಳಕಿಗೆ ಬಂದಿದೆ. ಮಮಕಾರವಿಲ್ಲದ ಮಗನೊಬ್ಬ ತನ್ನ ತಾಯಿಯ ಶವವನ್ನು ಎರಡು ವರ್ಷಗಳಿಂದ ಫ್ರಿಜ್ ನಲ್ಲಿಟ್ಟು ಹಣಮಾಡಿಕೊಳ್ಳುತ್ತಿದ್ದಾನೆ. ಆಕೆಗೆ ಬರುವ ಪಿಂಚಣಿಯನ್ನು, ಆಕೆಯ ಬೆರಳಿನ ಮುದ್ರೆಗಳಿಂದ ಪ್ರತೀ ತಿಂಗಳು ಪಡೆದುಕೊಳ್ಳುತ್ತಿದ್ದಾನೆ. ಮೈನವಿರೇಳಿಸುವ ಈ ಘಟನೆಯ ವಿವರಗಳನ್ನು ತಿಳಿಯೋಣ ಬನ್ನಿ…

ಬೀನಾ ಮುಜುಂದಾರ ಹೆಸರಿನ ಮಹಿಳೆಯೊಬ್ಬಳು ಕೇಂದ್ರ ಸರಕಾರದಲ್ಲಿ ಉದ್ಯೋಗ ಮಾಡುತ್ತಿದ್ದಳು. ರಿಟೈರ್ ಆದ ನಂತರ ಪ್ರತೀ ತಿಂಗಳು 50 ಸಾವಿರ ರೂಪಾಯಿಗಳ ಪಿಂಚಣಿಯನ್ನು ಪಡೆಯುತ್ತಿದ್ದಳು. 2015 ರಲ್ಲಿ ಅನಾರೋಗ್ಯದಿಂದ ಮರಣಿಸಿದಳು.

ಆದರೆ, ಆಕೆ ಮರಣಿಸಿದ ವಿಷಯವನ್ನು ಯಾರಿಗೂ ತಿಳಿಸದೆ, ಶವದ ಅಂತ್ಯಕ್ರಿಯೆಗಳನ್ನು ನೆರವೇರಿಸದೆ… ಆಕೆಯ ಶವವನ್ನು ಬಚ್ಚಿಟ್ಟಿದ್ದ ಆಕೆಯ ಮಗ ಸುಭ್ರತೋ ಮಜುಂದಾರ್.
ಲೆದರ್ ಟೆಕ್ನಾಲಜಿಯ ವಿದ್ಯಾರ್ಥಿಯಾದುದರಿಂದ ಕೆಲವು ರಾಸಾಯನಿಕಗಳನ್ನು ಉಪಯೋಗಿಸಿ, ಶವ ಕೆಡದಂತೆ ಇಟ್ಟಿದ್ದ.

ಪ್ರತೀ ತಿಂಗಳು ಆಕೆಗೆ ಬರುವ ಪಿಂಚಣಿಯನ್ನು ಆಕೆಯ ಬೆರಳುಗಳ ಮುದ್ರೆಗಳನ್ನು ಉಪಯೋಗಿಸಿ ತಾನೇ ಪಡೆದುಕೊಳ್ಳುತ್ತಿದ್ದ. ಆಕೆ ಬದುಕಿರುವಂತೆ ಪ್ರಮಾಣ ಪತ್ರವನ್ನೂ ನೀಡಿದ್ದ. ಅಕ್ಕ ಪಕ್ಕದ ಮನೆಗಳವರು ಈತನ ಚಲನ ವಲನಗಳ ಬಗ್ಗೆ ಅನುಮಾನಗೊಂಡು ಪೊಲೀಸರಿಗೆ ದೂರು ನೀಡಿದರು. ಪೊಲೀಸರ ದಾಳಿಯ ನಂತರ ವಿಸ್ಮಯಕಾರಿ ವಿಷಯಗಳು ಹೊರ ಬಂದವು.

ಶವವನ್ನು ಇಟ್ಟಿದ ಫ್ರಿಜ್ ಅನ್ನು ಪೊಲೀಸರು ವಶಪಡಿಸಿಕೊಂಡರು. ನಾನು ಮರಣಿಸಿದ ನಂತರ ನನ್ನ ಶವವನ್ನೂ ಸಹ ಹೀಗೆ ಪ್ರಿಜ್ ನಲ್ಲಿ ಇಡುವ ಆಲೋಚನೆ ಯನ್ನು ನನ್ನ ಮಗ ಹೊಂದಿದ್ದ ಎಂದು ಆತನ ತಂದೆ ಹೇಳಿದರು . ತನ್ನ ಹೆಂಡತಿಯ ಮರಣದ ಬಗ್ಗೆ ನನಗೆ ಗೊತ್ತಿದ್ದರೂ, ಬಾಯ್ಬಿಡದಂತೆ ಮಾಡಿದ್ದ ಎಂದು ತಿಳಿಸಿದ್ದಾರೆ.

SHARE