ದೇವೇಂದ್ರನು, ಅಗ್ನಿದೇವ, ವರುಣ, ವಾಯುದೇವ ಕಣ್ಣಾಕಿದ ಮನೋಹರ ಸುಂದರಿ ದಮಯಂತಿ ನಳನಿಗೆ ಯಾಕೆ ಸಿಕ್ಕಿದಳು?

ಹಿಂದೂ ಪುರಾಣಗಳಲ್ಲಿ ಇರುವ ನಳದಮಯಂತಿ ಬಗ್ಗೆ ಎಲ್ಲರಿಗೂ ಗೊತ್ತು. ಶನಿಗ್ರಹ ಪ್ರಭಾವದ ಕಾರಣ ರಾಜ್ಯವನ್ನು, ಸರ್ವ ಸಂಪತ್ತನ್ನೂ ಕಳೆದುಕೊಂಡು, ಬಳಿಕ ಕೆಲವು ಪರಿಣಾಮಗಳ ಕಾರಣ ಕುರೂಪಿಯಾಗಿ ಬದಲಾಗಿ ಕೊನೆಗೆ ತನ್ನ ರಾಜ್ಯವನ್ನು ನಳ ದಕ್ಕಿಸಿಕೊಂಡ. ಈ ಕ್ರಮದಲ್ಲಿ ನಳನ ಜತೆಗೆ ಆತನ ಪತ್ನಿ ದಮಯಂತಿ ಸಹ ಗಂಡನ ಕಾರಣ ಅದೆಷ್ಟೋ ಕಷ್ಟಗಳನ್ನು ಅನುಭವಿಸುತ್ತಾಳೆ. ಆದರೂ ಕೊನೆಗೆ ಕಥೆ ಸುಖಾಂತ್ಯವಾಗುತ್ತದೆ. ಇಷ್ಟಕ್ಕೂ ನಳನು ರಾಜ್ಯವನ್ನು ಯಾಕೆ ಕಳೆದುಕೊಳ್ಳುತ್ತಾನೆ, ಕೊನೆಗೆ ಹೇಗೆ ಮತ್ತೆ ಅದನ್ನು ಪಡೆಯುತ್ತಾನೆ, ದಮಯಂತಿ ಪ್ರೀತಿ ಎಂತಹದ್ದು ಎಂಬ ವಿವರಗಳನ್ನು ಈ ಕಥೆಯಲ್ಲಿ ತಿಳಿದುಕೊಳ್ಳೋಣ.

ವಿದರ್ಭ ಎಂದು ಕರೆಸಿಕೊಳ್ಳುವ ದೇಶದ ರಾಜ ಭೀಮರಾಜ. ಅವರ ಮಗಳೇ ದಮಯಂತಿ. ನಿಷಿಧ ರಾಜಾಧಿಪತಿ ವೀರಸೇನನ ಮಗ ನಳ ಮಹಾರಾಜ. ಒಬ್ಬರ ಗುಣಾವಗುಣಗಳನ್ನು ತಿಳಿದುಕೊಂಡು ನಳದಮಯಂತಿಯರಿಬ್ಬರೂ ಪ್ರೀತಿಯಲ್ಲಿ ಬೀಳುತ್ತಾರೆ. ಆದರೆ ದಮಯಂತಿ ರೂಪಲಾವಣ್ಯಗಳಿಗಷ್ಟೇ ಅಲ್ಲ, ಗುಣಶೀಲಗಳಿಂದಲೂ ಹೆಸರು ಮಾಡಿರುತ್ತಾಳೆ. ಇದರಿಂದ ಆಕೆಯನ್ನು ಪಡೆಯಲು ದೇವೇಂದ್ರ, ಅಗ್ನಿ, ವರುಣ, ವಾಯುದೇವ ಸಹ ಆಸಕ್ತಿ ತೋರುತ್ತಾರೆ. ಆದರೆ ದಮಯಂತಿ ತಾನು ನಳನ್ನು ಪ್ರೀತಿಸುತ್ತಿರುವ ವಿಷಯವನ್ನು ಭೀಮರಾಜನಿಗೆ ತಿಳಿಸಲ್ಲ. ಇದರಿಂದ ಭೀಮರಾಜ ದಮಯಂತಿಗೆ ಸ್ವಯಂವರ ಏರ್ಪಡಿಸುತ್ತಾನೆ. ಅದಕ್ಕೆ ದೇವೇಂದ್ರ, ಅಗ್ನಿ, ವರುಣ, ವಾಯುದೇವ ಬರುತ್ತಾರೆ. ಇನ್ನು ದಮಯಂತಿ ಪ್ರಿಯಕರ ನಳ ಮಹಾರಾಜ ಸಹ ಬರುತ್ತಾನೆ.

ಆದರೆ ಸ್ವಯಂವರ ಸಮಯದಲ್ಲಿ ದೇವೇಂದ್ರ, ಅಗ್ನಿ, ವರುಣ, ವಾಯುದೇವ ನಾಲ್ಕೂ ಮಂದಿ ದಮಯಂತಿಗೆ ನಳನಂತೆಯೆ ಕಾಣಿಸುತ್ತಾರೆ. ಹಾಗಾಗಿ ಆಕೆ ಸ್ವಲ್ಪ ಸಮಯ ಅಚ್ಚರಿಗೆ ಒಳಗಾಗುತ್ತಾಳೆ. ಕೊನೆಗೆ ಆಕೆ ಇಷ್ಟದೈವವಾದ ಸರಸ್ವತಿಯನ್ನು ಪ್ರಾರ್ಥಿಸಿದಾಗ ಆಗ ಆಕೆಗೆ ಅಸಲಿ ನಳ ಕಾಣಿಸುತ್ತಾನೆ. ಇದರಿಂದ ನಳನ ಕೊರಳಿಗೆ ಹಾರ ಹಾಕಿ ಆತನನ್ನು ಆಕೆ ಮದುವೆಯಾಗುತ್ತಾಳೆ. ಈ ಹಿನ್ನೆಲೆಯಲ್ಲಿ ಅವರ ಮದುವೆ ವೈಭವೋಪೇತವಾಗಿ ನಡೆಯುತ್ತದೆ. ಬಳಿಕ ಅವರಿಗೆ ಮಗಳು, ಮಗ ಜನಿಸುತ್ತಾರೆ.

ನಳ, ದಮಯಂತಿ ಆ ರೀತಿ ಸ್ವರ್ಗ ಸುಖಗಳನ್ನು ಅನುಭವಿಸುತ್ತಿದ್ದಾಗ ಒಮ್ಮೆಲೆ ಅವರ ಜೀವನದಲ್ಲಿ ಮಹತ್ತರ ಬದಲಾವಣೆ ಬರುತ್ತದೆ. ಶನಿ ಗ್ರಹ ಪ್ರಭಾವದ ಕಾರಣ ನಳ ದುರಭ್ಯಾಸಗಳಿಗೆ ಬಲಿಯಾಗುತ್ತಾನೆ. ಇದರಿಂದ ಸಹೋದರನಾದ ಪುಷ್ಕರನ ಕೈಲಿ ಜೂಜಾಡಿ ಸೋಲುತ್ತಾನೆ. ಹಾಗಾಗಿ ನಳನು ರಾಜ್ಯವನ್ನು, ಸರ್ವ ಸಂಪತ್ತನ್ನೂ ಕಳೆದುಕೊಳ್ಳುತ್ತಾನೆ. ಪತ್ನಿ ದಮಯಂತಿ ಜತೆಗೆ ಉಟ್ಟಬಟ್ಟೆಯಲ್ಲಿ ಕಾಡಿಗೆ ಹೋಗುತ್ತಾನೆ. ಆದರೆ ಆ ಕಿಂಕಾರಣ್ಯದಲ್ಲಿ ಮಕ್ಕಳು ಇರುವುದು ಒಳ್ಳೆಯದಲ್ಲ ಎಂದು ಭಾವಿಸಿ ದಮಯಂತಿ ತನ್ನ ಮಕ್ಕಳನ್ನು ತಂದೆಯ ಬಳಿಗೆ ಕಳುಹಿಸುತ್ತಾಳೆ. ಇನ್ನು ದಮಯಂತಿ ಕಷ್ಟಗಳನ್ನು ನೋಡಲಾಗದೆ ನಳನು ಆಕೆಯನ್ನು ಕಾಡಿನಲ್ಲಿ ಬಿಟ್ಟುಹೋಗುತ್ತಾನೆ.

ಆ ರೀತಿ ಕಾಡಿನಲ್ಲಿ ಅಲೆಯುತ್ತಿದ್ದ ದಮಯಂತಿಯನ್ನು ಕಾಡುಮನುಷ್ಯ ಅತ್ಯಾಚಾರವೆಸಲು ಹೋದಾಗ ಭಸ್ಮವಾಗುತ್ತಾನೆ. ದಮಯಂತಿ ಪತಿಯನ್ನು ಹುಡುಕುತ್ತಾ ಕಾಡನ್ನು ದಾಟಿ ನಗರ ಸೇರುತ್ತಾಳೆ. ಬಳಿಕ ಚಿಕ್ಕಮ್ಮ ಪದ್ಮಾವತಿ ಮನೆಗೆ ಹೋಗುತ್ತಾಳೆ. ಅಲ್ಲಿಂದ ತಂದೆ ಬಳಿಗೆ ದಮಯಂತಿ ತಲುಪುತ್ತಾಳೆ. ಆದರೆ ಆಕೆಗೆ ನಳ ಏನಾದ ಎಂದು ಗೊತ್ತಾಗಲ್ಲ. ಇನ್ನೊಂದು ಕಡೆ ದಮಯಂತಿಯನ್ನು ಬಿಟ್ಟ ನಳನು ಕಾಡಿನಲ್ಲಿ ತಿರುಗುತ್ತಿರಬೇಕಾದರೆ ಕಾರ್ಕೋಟಕ ಎಂಬ ಸರ್ಪ ನಳನನ್ನು ಕಚ್ಚುತ್ತದೆ. ಇದರಿಂದ ನಳನ ದೇಹದ ಬಣ್ಣ ಕಪ್ಪಗಾಗುತ್ತದೆ. ನಳ ಕುರೂಪಿಯಾಗುತ್ತಾನೆ. ಆತ ಅಸಲು ಗುರುತು ಸಿಗದಷ್ಟು ಬದಲಾಗುತ್ತಾನೆ. ಈ ಹಿನ್ನೆಲೆಯಲ್ಲಿ ಬಾಹುಕುನಿ ಹೆಸರಲ್ಲಿ ರಥಸಾರಥಿಯಾಗಿ ವಿದರ್ಭ ರಾಜ್ಯ ತಲುಪುತ್ತಾನೆ. ಆದರೆ ಪತ್ನಿ ದಮಯಂತಿ ಮಾತ್ರ ಗಂಡನನ್ನು ಗುರುತಿಸುತ್ತಾಳೆ. ಅವರ ನಡುವಿನ ಪ್ರೀತಿ ಮತ್ತೆ ಅವರನ್ನು ಒಂದು ಮಾಡುತ್ತದೆ. ಹಾಗಾಗಿಯೇ ಆತ ಕುರೂಪಿಯಾಗಿದ್ದರೂ ಆಕೆ ಗುರುತಿಸುತ್ತಾಳೆ.

ಬಳಿಕ ಸ್ವಲ್ಪ ದಿನಗಳಿಗೆ ನಳನ ಮೇಲಿನ ಶನಿ ಗ್ರಹದ ಪ್ರಭಾವ ಹೋಗುತ್ತದೆ. ಇದರಿಂದ ಆತ ಮತ್ತೆ ನಿಜ ರೂಪ ಬರುತ್ತದೆ. ಆ ರೀತಿ ಬಂದ ಕೂಡಲೆ ನಳನು ಪುಷ್ಕರನ ಜತೆಗೆ ಮತ್ತೆ ಜೂಜಾಡಿ ತಾನು ಕಳೆದುಕೊಂಡ ರಾಜ್ಯವನ್ನು ಮತ್ತೆ ದಕ್ಕಿಸಿಕೊಳ್ಳುತ್ತಾನೆ. ಸಕಲ ಸಂಪತ್ತುಗಳು ಮತ್ತೆ ಬರುತ್ತವೆ. ಇನ್ನು ಅಲ್ಲಿಂದ ನಳ, ದಮಯಂತಿ ಇಬ್ಬರೂ ಪ್ರೀತಿಯಿಂದ ಇರುತ್ತಾರೆ. ಅದರ್ಶ ಜೋಡಿಯಾಗಿ ಜೀವನ ಸಾಗಿಸುತ್ತಾರೆ. ಹಾಗಾಗಿಯೇ ನಳ ದಮಯಂತಿ ಕಥೆಯನ್ನು ಪ್ರತಿ ದಂಪತಿಗಳೂ ಕೇಳಬೇಕೆಂದು ಹೇಳುತ್ತಾರೆ.

SHARE