‘ದಿ ವಿಲನ್’ ಚಿತ್ರದಲ್ಲಿ ಸುದೀಪ್ ಅವರ ಎಕ್ಸ್‌ಕ್ಲ್ಯೂಸಿವ್ ಫೋಟೋ ಇಲ್ಲಿದೆ !!

ಸೆಟ್ಟೇರಿದ ದಿನದಿಂದಲೂ ಒಂದಿಲ್ಲೊಂದು ಅಚ್ಚರಿ ನೀಡುತ್ತಲೇ ಬಂದಿರುವ ‘ದಿ ವಿಲನ್’ ಚಿತ್ರತಂಡ ಕೊನೆಗೂ ಸುದೀಪ್ ಹಾಗೂ ಶಿವಣ್ಣ ರವರ ಲುಕ್ ನ ಪ್ರೇಮ್ ರಿವೀಲ್ ಮಾಡಿದೆ. ಹೌದು, ಸಾಕಷ್ಟು ನಿರೀಕ್ಷೆ ಮೂಡಿಸಿರುವ ಈ ಚಿತ್ರವೂ ಒಂದಿಲ್ಲೊಂದು ಕಾರಣದಿಂದ ಸುದ್ದಿಯಾಗುತ್ತಲೇ ಇದ್ದು, ಸದ್ಯ ಹೊಸ ಸುದ್ದಿಯೊಂದಿಗೆ ಪ್ರೇಕ್ಷಕರಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗೆ ಮುಂದೆ ಓದಿ.

ವರ್ಷವೇ ಕಳೆದರೂ ‘ದಿ ವಿಲನ್’ ಚಿತ್ರದಲ್ಲಿ ವಿಲನ್ ಯಾರು.? ಹೀರೋ ಯಾರು.? ಎಂಬ ಗುಟ್ಟನ್ನ ಪ್ರೇಮ್ ಬಿಟ್ಟುಕೊಟ್ಟಿಲ್ಲ. ಹಾಗಾದ್ರೆ ಈ ಚಿತ್ರದಲ್ಲಿ ನಿಜವಾದ ವಿಲ್ಲನ್ ಯಾರು ಎಂಬ ಪ್ರೆಶ್ನೆ ಪ್ರೆಶ್ನೆಯಾಗಿಯೇ ಉಳಿದಿದೆ. ಇಷ್ಟೆಲ್ಲಾ ಗೊಂದಲಗಳ ನಡುವೆ ಈ ಚಿತ್ರದ ಸುದೀಪ್ ಹಾಗೂ ಶಿವಣ್ಣ ರವರ ಲುಕ್ ನ ಪ್ರೇಮ್ ರಿವೀಲ್ ಆಗಿದ್ದು, ಸದ್ಯ ಹೆಚ್ಚು ಸದ್ದು ಮಾಡುತ್ತಿದೆ.

ಹೊಸ ಲುಕ್ ಬಗ್ಗೆ :

ಸದ್ಯ ‘ದಿ ವಿಲನ್’ ಸೆಟ್ ನಿಂದ ಕೊಂಚ ಬಿಡುಗಡೆ ಮಾಡಿಕೊಂಡಿರುವ ಪ್ರೇಮ್ ಹಾಗೂ ಕಿಚ್ಚ ಸುದೀಪ್ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ‘ನಂ.1 ಯಾರಿ ವಿತ್ ಶಿವಣ್ಣ’ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದರು. ಇದೇ ಕಾರ್ಯಕ್ರಮದಲ್ಲಿ ‘ದಿ ವಿಲನ್’ ಚಿತ್ರದಲ್ಲಿನ ಸುದೀಪ್ ಹಾಗೂ ಶಿವಣ್ಣ ರವರ ಲುಕ್ ನ ಪ್ರೇಮ್ ರಿವೀಲ್ ಮಾಡಿದರು.

ಕಿಚ್ಚ ಸುದೀಪ್ ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ‘ದಿ ವಿಲನ್’ ಸಿನಿಮಾ ಶುರುವಾಗಿ ತಿಂಗಳುಗಳೇ ಕಳೆದಿದ್ದು, ಈ ಚಿತ್ರದಲ್ಲಿ ಸುದೀಪ್, ಶಿವರಾಜ್ ಕುಮಾರ್ ಜೊತೆಗೆ ಆಮಿ ಜಾಕ್ಸನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸುದೀಪ್ ಹಾಗೂ ಶಿವಣ್ಣ ರವರನ್ನ ಮೊಟ್ಟಮೊದಲ ಬಾರಿಗೆ ಒಟ್ಟಿಗೆ ತರುತ್ತಿರುವ ಚಿತ್ರ ಇದು. ‘ಕಲಿ’ ಚಿತ್ರ ಡ್ರಾಪ್ ಆದ್ಮೇಲೆ, ಸುದೀಪ್ ಹಾಗೂ ಶಿವಣ್ಣ ಗ್ರೀನ್ ಸಿಗ್ನಲ್ ಕೊಟ್ಟಿರುವುದು ಇದೇ ಚಿತ್ರಕ್ಕೆ.

SHARE