RCB ಈ ಸಲ ಕಪ್ ಗೆದ್ರೆ ಆಗಬಹುದಾದ 12 ಖತರ್ನಾಕ್ ಘಟನೆಗಳು…

ರಾಯಲ್ ಚಾಲೆಂಜರ್ ಬೆಂಗಳೂರು ಐಪಿಎಲ್ ನಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನ ಹೊಂದಿರುವ ತಂಡವಾಗಿದ್ದು, ಎಷ್ಟೋ ಸಲ ಫೈನಲ್ ಗೆ ಬಂದ್ರು ಕಪ್ ಗೆಲ್ಲೋಕೆ ಆಗದೆ ಇರೋ ನತದೃಷ್ಟ ತಂಡ. ಆದರೂ ಕಪ್ ಗೆಲ್ಲಲಿ, ಬಿಡಲಿ ಅದರ ಅಭಿಮಾನಿಗಳ ಸಂಖ್ಯೆ ಯೇನು ಕಡಿಮೆ ಇಲ್ಲ ಈ ಬಾರಿಯೂ ಸಹ ಕಪ್ ನಮ್ದೆ ಅಂತ ಐಪಿಎಲ್ ಕಣಕ್ಕಿಳಿದಿರುವ RCB ಅಕಸ್ಮಾತ್ ಚಾಂಪಿಯನ್ ಆದ್ರೆ ಏನೆಲ್ಲ ಘಟನೆಗಳು ನಡಿಬಹುದು ಅಂತ ನೋಡೋಣ ಬನ್ನಿ.

೧. ಗುಡುಗು ಮಿಂಚಿನ ಭಾರಿ ಮಳೆ :

RCB ಏನಾದ್ರು ಗೆಲ್ಲುವ ಹಂತದಲ್ಲಿ ಕೊನೆ ಚಂಡನ್ನ ಬೌಂಡರಿ ದಾಟಿಸಿದ್ರೆ ಅಥವಾ ಗೆಲ್ಲಲು ಬೇಕಾದ ಕೊನೆ ವಿಕೆಟ್ ಕಬಳಿಸಿದ್ರೆ ಆಕಾಶದಲ್ಲಿ ಗುಡುಗು ಮಿಂಚಿನ ಸಮೇತ ಭಾರಿ ಮಳೆ ಆಗಬಹುದು.

೨. RCB ಯ ವೈರಿಗಳು ದೇಶ ಬಿಡ್ತರೆ :

ಬೇರೆ ದಾರಿನೇ ಇಲ್ಲ ..! RCB ಗೆದ್ರೆ ಅದರ ವೈರಿಗಳು ಮುಖ ತೋರಿಸೋಕೆ ಆಗದೆ ದೇಶ ಬಿಡಬೇಕಾಗುತ್ತೆ.

೩. ವಿರಾಟ್ ಕೊಹ್ಲಿ ಕರ್ನಾಟಕದ ಮುಖ್ಯಮಂತ್ರಿ ಆಗ್ತನೆ :

ಯಾರಿಗೆ ಗೊತ್ತು ಅಭಿಮಾನದ ಹೊಳೆಲಿ ಇದು ಆಗಬಹುದು !?

೪. RCB ರತ್ನ ಅವಾರ್ಡ್ ಸ್ಥಪನೆ :

೧೦ ವರ್ಷದಿಂದ ಯಾರು ನಿರಂತರವಾಗಿ RCB ಗೆ ಸಪೋರ್ಟ್ ಮಾಡ್ತಿದರೋ ಅವರಿಗೆ ಭಾರತ ಸರ್ಕಾರ ” RCB ರತ್ನ” ಅವಾರ್ಡ್ ಕೊಡಬಹುದು.

೫. ವಿಜಯ್ ಮಲ್ಯ ವಾಪಸ್ ಬರ್ತಾನೆ :

ಇದಂತೂ ಗ್ಯಾರೆಂಟಿ: ವಿಜಯ್ ಮಲ್ಯ ಸ್ಟೈಲ್ ಆಗಿ ವಾಪಸ್ ಬಂದು ಇನ್ನೊಂದು ಸ್ವಲ್ಪ ಸಾಲ ಮಾಡಿ ಮತ್ತೆ ಓಡಿ ಹೋಗ್ತಾನೆ.

೬. # ESCN & # ಈ ಸಲ ಕಪ್ ನಮ್ದೆ ಅಂತ ಮಾರ್ಕ್ ಜುಕರ್ ಬರ್ಗ್ ಹಾಷ್ ಟ್ಯಾಗ್ ರಚನೆ ಮಾಡ್ತಾರೆ

RCB ಅಭಿಮಾನಿಗಳಿಗೋಸ್ಕರ ಜುಕರ್ ಬರ್ಗ್ # ESCN ಅಂತ ಕ್ರಿಯೇಟ್ ಮಾಡಿದ್ರು ಮಾಡಬಹುದು.

೭ . ಈ ಯಶಸ್ಸನ್ನ ಬಿಜೆಪಿಯವರು ಅಚ್ಛೆ ದಿನ್ ಜಾಹೀರಾತಿಗೆ ಬಳಸಬಹುದು :

ಅಮಿತ್ ಷಾ ಅವರು ನೋಡಿ ಇದೇ ಅಚ್ಚೇ ದಿನ್ ಈ ಸಲ ಕಪ್ ನಮ್ದೆ ಮುಂದಿನ ಎಲೆಕ್ಷನ್ ಅಲ್ಲಿ ಕಪ್ ನಮ್ದೆ ಅಂತ ಪ್ರಚಾರ ಮಾಡ್ತರೆ .

೮. ವಾಟಾಳ್ ನಾಗರಾಜ್ ಟೋಪಿ ಮತ್ತು ಕನ್ನಡಕ ತೆಗಿತಾರೆ :

ಕರ್ನಾಟಕದ ಬಂದ್ ಮ್ಯಾನ್ ಅಂತನೆ ಪ್ರಸಿದ್ದಿಯಾಗಿರೋ ವಾಟಾಳ್ RCB ಗೆದ್ದ ಖುಷಿಗೆ ಟೋಪಿ ಮತ್ತೆ ಕನ್ನಡಕ ಎರೆಡೂ ತೆಗೆದು ತಮಟೆ ಹೊಡಿತಾರೆ.

೯. RCB ಬಣ್ಣದಲ್ಲಿ ೧೧ ರೂ. ನೋಟ್ ಪ್ರಿಂಟ್ ಆಗುತ್ತೆ :

ಈ ಸಾರಿ RCB ಗೆದ್ರೆ ಅದೇ ಖುಷಿಗೆ RBI ನವರು ಕೆಂಪು ಮತ್ತು ಚಿನ್ನದ ಬಣ್ಣದಲ್ಲಿ ೧೧ ರೂಪಾಯಿ ನೋಟ್ ಪ್ರಿಂಟ್ ಮಾಡ್ತರೆ .

೧೦. ಮೇ 27 ವಿಶ್ವ ಅಭಿಮಾನಿಗಳ ದಿನ :

ಮೇ ೨೭ ರ ಫೈನಲ್ ಮ್ಯಾಚ್ ನಲ್ಲಿ RCB ಗೆದ್ರೆ ಭಾರತ ಸರ್ಕಾರ ಸರ್ಕಾರಿ ರಜಾದಿನ ಅಂತ ಘೋಷಣೆ ಮಾಡಿ . ವಿಶ್ವ ಅಭಿಮಾನಿಗಳ ದಿನ ಅಂತ ಆಚರಣೆ ಮಾಡುತ್ತೆ

೧೧. SSLC ಪಠ್ಯಪುಸ್ತಕದಲ್ಲಿ RCB ಅಧ್ಯಾಯ :

೧೦ ವರ್ಷಗಳ ನಿರಂತರ ಪ್ರಯತ್ನದಿಂದ RCB ಹೇಗೆ ಕಪ್ ಗೆಲ್ತು ಅಂತ ೧೦ ನೆ ತರಗತಿ ಪುಸ್ತಕದಲ್ಲಿ ಓದಬಹುದು.

೧೨. RCB ಅಭಿಮಾನಿಗಳು ಉತ್ತಮ ವಾಗ್ಮಿಗಳಾಗುತ್ತಾರೆ :

ಎಷ್ಟೇ ಸೋತರೂ ೧೦ ವರ್ಷಗಳಿಂದ RCB ಬಗ್ಗೆ ಒಳ್ಳೆ ಮಾತಾಡಿ ಅಭಿಮಾನಿಗಳು ಉತ್ತಮ ವಾಗ್ಮಿಗಳಾಗುತ್ತಾರೆ.

ಹಾಂ..! ಇವೆಲ್ಲ ಆಗುತ್ತೋ ಇಲ್ವೋ ಗೊತ್ತಿಲ್ಲ ಆದರೆ ಒಂದು ಒಳ್ಳೆ ನಿರೀಕ್ಷೆಯೊಂದಿಗೆ ಈ ಸಲ ಕಪ್ ನಮ್ದೆ ಅಂತ ಹೇಳೋಣ.

SHARE