ಗೂಗಲ್ ಇಮೇಜ್ ಸರ್ಚ್‍ನಲ್ಲಿ 241543903 ನಂಬರ್ ಸರ್ಚ್ ಮಾಡಿದರೆ ಬರುವ ವಿಚಿತ್ರ ನೋಡಿ..! ಚಕಿತರಾಗುತ್ತೀರ.

ಇಂದು ನಡೆಯುತ್ತಿರುವುದೆಲ್ಲಾ ಸಾಮಾಜಿಕ ಮಾಧ್ಯಮ ಯುಗ. ಅದರಲ್ಲಿ ಯಾರಾದರೂ ತಾವು ಮಾಡಿದ ಯಾವುದಾದರೂ ಒಂದು ವಿಚಿತ್ರ ಕೆಲಸಕ್ಕೆ ಸಂಬಂಧಿಸಿದ ಪೋಸ್ಟ್ ಹಾಕಿದರೆ ಅದು ವೈರಲ್ ಆಗುತ್ತದೆ. ಇಂತಹ ಸಂದರ್ಭಗಳಲ್ಲಿ ಕೆಲವು ಸಲ ಪೋಸ್ಟ್‌ಗಳಲ್ಲಿ ಇರುವಂತೆಯೇ ಆ ಕೆಲಸ ಮಾಡಬೇಕೆಂದು ನೋಡುತ್ತಾರೆ. ಅದನ್ನು ಅನುಸರಿಸುತ್ತಾರೆ. ಇದರಿಂದ ಅವು ಸಹ ವೈರಲ್ ಆಗುತ್ತವೆ. ನಾವೀಗ ಹೇಳಲಿರುವುವು ಸಹ ಇಂತಹದ್ದೇ ಒಂದು ಪೋಸ್ಟ್ ಬಗ್ಗೆ. ನಿಜವಾಗಿ ಅದು ಈಗಿನದಲ್ಲ. ಯಾವಾಗಲೋ ವೈರಲ್ ಆಗಿದೆ. ಆದರೆ ಅದರ ಹೆಸರಿನಲ್ಲಿ ಈಗಲೂ ಕೆಲವರು ಫೋಟೋಗಳನ್ನು ಅಪ್‍ಲೋಡ್ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ, ಇಂಟರ್‌ನೆಟ್‍ನಲ್ಲಿ ಹಾಕುತ್ತಿದ್ದಾರೆ. ಆದರೆ ಇಷ್ಟಕ್ಕೂ ಪೋಸ್ಟ್ ಏನು, ಅದಕ್ಕೆ ಸಂಬಂಧಿಸಿದ ಫೋಟೋ ಏನು ಎಂಬುದನ್ನು ಈಗ ತಿಳಿದುಕೊಳ್ಳೋಣ..!

ಇಂಟರ್‌ನೆಟ್‌ನಲ್ಲಿ ಗೂಗಲ್ ಸರ್ಚ್‌ನಲ್ಲಿ ಇಮೇಜ್ ಸರ್ಚ್‍ಗೆ ಹೋಗಿ 241543903 ಎಂಬ ನಂಬರನ್ನು ಅದರಲ್ಲಿ ಸರ್ಚ್ ಮಾಡಿ. ಆಗ ಕೆಳಗೆ ಕೊಟ್ಟಿರುವ ಸರ್ಚ್ ರಿಸಲ್ಟ್ಸ್ ಬರುತ್ತವೆ. ಎಲ್ಲವೂ ಒಂದೇ ತೆರನಾದ ಇಮೇಜ್‌ಗಳು. ಇವೇನೆಂದರೆ… ತಲೆಯನ್ನು ಫ್ರಿಜ್‌ನಲ್ಲಿಟ್ಟಾಗ ತೆಗೆದ ಫೋಟೋಗಳು ಸರ್ಚ್ ರಿಸಲ್ಟ್ ನಲ್ಲಿ ಕಾಣುತ್ತವೆ. ಆದರೆ ಮೇಲೆ ತಿಳಿಸಿದ ಆ ನಂಬರ್‌ಗೂ, ಈ ರೀತಿಯ ಫೋಟೋಗಳಿಗೂ ಸಂಬಂಧ ಏನು ಗೊತ್ತಾ..?

ಜೇ ಹತ್‌ವೇ ಎಂಬ ಓರ್ವ ವ್ಯಕ್ತಿ 2009ರಲ್ಲಿ ತಾನು ಕೊಂಡ ಫ್ರಿಜ್ ಡೋರ್ ತೆಗೆದು ಅದರಲ್ಲಿ ತಲೆಯಿಟ್ಟು ಫೋಟೋ ತೆಗೆದುಕೊಂಡ. ಬಳಿಕ ಆ ಫೋಟೋವನ್ನು ಆ ಫ್ರಿಜ್ ಸೀರಿಯಲ್ ನಂಬರನ್ನು 241543903ನ್ನು ರೀನೇಮ್ ಮಾಡಿದ. ಬಳಿಕ ಆ ಫೋಟೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಮಾಡಿದ. ಇದರಿಂದ ಆತನು ಮಾಡಿದ ಕೆಲಸವನ್ನು ಎಲ್ಲರೂ ಫಾಲೋ ಮಾಡಿದರು. ಅವರು ಸಹ ತಮ್ಮತಮ್ಮ ಮನೆಗಳಲ್ಲಿನ ಫ್ರಿಜ್‌ಗಳಲ್ಲಿ ತಲೆ ತೂರಿಸಿ ಫೋಟೋ ತೆಗೆದು ಅವನ್ನು ಸೇಮ್ ಅದೇ ಸಂಖ್ಯೆಯನ್ನು ರೀನೇಮ್ ಮಾಡಿ ಅವನ್ನು ನೆಟ್‌ನಲ್ಲಿ ಅಪ್‌ಲೋಡ್ ಮಾಡಿದರು. ಆಗ ಈ ಫೋಟೋ ಟ್ರೆಂಡ್ ಆಯಿತು. ಈಗಲೂ ಬಹಳಷ್ಟು ಮಂದಿ ಆ ರೀತಿ ಫ್ರಿಜ್‌ನಲ್ಲಿ ತಲೆತೂರಿಸಿ ಫೋಟೋ ತೆಗೆದುಕೊಂಡು ಅದನ್ನು ಮೊದಲು ಹೇಳಿದ ಆ ನಂಬರ್ ರೀನೇಮ್ ಮಡಿ ಆ ಫೋಟೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇನ್ನು 241543903 ಎಂಬ ಈ ನಂಬರ್‌ನ್ನು ಹುಡುಕಿದರೆ ಎಲ್ಲವೂ ಫ್ರಿಜ್‌ನಲ್ಲಿ ತಲೆ ಇಟ್ಟಿರುವ ಫೋಟೋಗಳು ಸಿಗುತ್ತವೆ. ಜೇ ಹತ್ ವೇ ನಿಜವಾಗಿ ಇದಿಷ್ಟೇ ಅಲ್ಲ, ಬಹಳಷ್ಟು ವಿಚಿತ್ರ ಕೆಲಸಗಳನ್ನು ಮಾಡಿ ಅವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡು ಅವು ವೈರಲ್ ಆಗಿವೆ. ಏನೂ ಕೆಲಸ ಇಲ್ಲದವರಿಗೆ ಈ ರೀತಿಯ ವಿಚಿತ್ರ ಐಡಿಯಾಗಳು ಬರುತ್ತವೆ ಅಲ್ಲವೇ. ?

SHARE