ಎಂತಹ ದಂಪತಿಗಳಿಗೆ ಅವಳಿ ಮಕ್ಕಳು ಹುಟ್ಟುವ ಸಾಧ್ಯತೆಗಳು ಹೆಚ್ಚಾಗಿ ಇರುತ್ತವೆ ಗೊತ್ತಾ..?

ಮದುವೆಯಾದ ಯಾವ ದಂಪತಿಗಳಾದರೂ ಮಕ್ಕಳನ್ನು ಪಡೆಯಬೇಕೆಂದು ಬಯಸುತ್ತಾರೆ. ಆದರೆ ಕೆಲವರು ಆ ಕೆಲಸವನ್ನು ಮದುವೆಯಾದ ಕೂಡಲೆ ಮಾಡುತ್ತಾರೆ. ಕೆಲವರು ತಡವಾಗಿ ಮಕ್ಕಳನ್ನು ಪಡೆಯುತ್ತಾರೆ. ಆದರೆ ಕೆಲವರು ಮಾತ್ರ ಎಷ್ಟೇ ಪ್ರಯತ್ನಿಸಿದರೂ ಮಕ್ಕಳಾಗಲ್ಲ. ಹಾಗಾಗಿ ಅಂತಹವರು ಬೇರೆ ಮಾರ್ಗಗಳನ್ನು ಅನುಸರಿಸಿ ಅಥವಾ ಮಕ್ಕಳನ್ನು ದತ್ತು ತೆಗೆದುಕೊಳ್ಳುವಂತಹ ಕೆಲಸಗಳನ್ನು ಮಾಡುತ್ತಿರುತ್ತಾರೆ. ಇಷ್ಟಕ್ಕೂ ಮಕ್ಕಳನ್ನು ಹೆರುವ ವಿಚಾರಕ್ಕೆ ಬಂದರೆ.. ಸಾಮಾನ್ಯವಾಗಿ ಯಾವುದೇ ಜೋಡಿಗಾದರೂ ಗಂಡು ಅಥವಾ ಹೆಣ್ಣು ಮಗು ಜನಿಸುತ್ತದೆ. ಆದರೆ ಕೆಲವರಿಗೆ ಅವಳಿ ಮಕ್ಕಳು ಹುಟ್ಟುತ್ತಾರೆ. ಹಾಗಿದ್ದರೆ ಈ ರೀತಿ ಯಾಕೆ ನಡೆಯುತ್ತದೆ. ಎಂತಹ ದಂಪತಿಗಳಿಗೆ ಅವಳಿ ಮಕ್ಕಳು ಹುಟ್ಟುವ ಅವಕಾಶಗಳು ಇರುತ್ತವೆ ಎಂಬುದನ್ನು ಈಗ ತಿಳಿದುಕೊಳ್ಳೋಣ..!

ದಂಪತಿಗಳಿಗೆ ಅವಳಿ ಮಕ್ಕಳು ಹುಟ್ಟಲು ಅನೇಕ ಕಾರಣಗಳಿವೆ. ಅವು ನಿರ್ದಿಷ್ಟವಾದವೆಂದು ಹೇಳಲು ಸಾಧ್ಯವಾಗದಿದ್ದರೂ ಕೆಲವು ಕಾರಣಗಳನ್ನು ಮಾತ್ರ ವಿಜ್ಞಾನಿಗಳು ಹೇಳುತ್ತಿದ್ದಾರೆ. ಅವೇನೆಂದರೆ…

1. ಕುಟುಂಬದಲ್ಲಿ ಯಾರಿಗಾದರೂ ಅವರ ವಂಶದಲ್ಲಿ ಅವಳಿ ಮಕ್ಕಳು ಹುಟ್ಟಿದರೆ ಮುಂದಿನ ತಲೆಮಾರಿನವರಿಗೂ ಸಹ ಅವಳಿ ಮಕ್ಕಳು ಹುಟ್ಟುವ ಅವಕಾಶ ಶೇ.29ರಷ್ಟು ಇರುತ್ತದೆ ಎಂದು ವಿಜ್ಞಾನಿಗಳು ಮಾಡಿದ ಸಂಶೋಧನೆಯಲ್ಲಿ ಗೊತ್ತಾಗಿದೆ.

2. ಅಮೆರಿಕಾ, ಆಫ್ರಿಕಾ ದೇಶದವರಿಗೆ ಅವಳಿ ಮಕ್ಕಳು ಹುಟ್ಟುವ ಅವಕಾಶ ಹೆಚ್ಚಾಗಿ ಇರುತ್ತದಂತೆ. ಅಲ್ಲಿ ಜನಿಸುತ್ತಿರುವ ಪ್ರತಿ 1000 ಮಂದಿ ಶಿಶುಗಳಲ್ಲಿ 37 ಮಂದಿ ಅವಳಿಗಳಿವೆ. ಜಗತ್ತಿನೊಂದಿಗೆ ಹೋಲಿಸಿದರೆ ಇದು ಅತಿಹೆಚ್ಚು. ಇತರೆ ದೇಶಗಳಲ್ಲಿ ಈ ಸಂಖ್ಯೆ 32ರಷ್ಟಿದೆ.

3. ಮಹಿಳೆ ವಯಸ್ಸು 35 ವರ್ಷಗಳಿಗಿಂತ ಹೆಚ್ಚಾಗಿದ್ದರೆ ಅವರಿಗೆ ಅವಳಿ ಮಕ್ಕಳು ಹುಟ್ಟುವ ಅವಕಾಶಗಳು ಹೆಚ್ಚಾಗಿ ಇರುತ್ತವೆ. ಸಾಮಾನ್ಯವಾಗಿ ಇಂತಹವರಲ್ಲಿ ಬಿಡುಗಡೆಯಾಗುವ ಅಂಡಾಣು ಗುಣಮಟ್ಟ ಹೆಚ್ಚಾಗಿ ಇರುತ್ತದೆ. ಒಮ್ಮೊಮ್ಮೆ ಎರಡು ಅಂಡಾಣು ಬಿಡುಗಡೆಯಾದರೆ ಅವಳಿ ಮಕ್ಕಳು ಹುಟ್ಟುತ್ತಾರೆ.

4. ಮಹಿಳೆಯ ಎತ್ತರ 5 ಅಡಿಗಳು 5 ಇಂಚು ಇದ್ದರೂ ಅವರಿಗೆ ಅವಳಿ ಮಕ್ಕಳು ಹುಟ್ಟುವ ಅವಕಾಶ ಇರುತ್ತದೆ ಎಂದು ವಿಜ್ಞಾನಿಗಳು ಮಾಡಿದ ಸಂಶೋಧನೆಯಲ್ಲಿ ಗೊತ್ತಾಗಿದೆ.

5. ಬಿಎಂಐ (ಬಾಡಿ ಮಾಸ್ ಇಂಡೆಕ್ಸ್ – ಸ್ಥೂಲಕಾಯ ಮಾಪನ) 30ಕ್ಕಿಂತಲೂ ಹೆಚ್ಚಾಗಿದ್ದರೆ ಆ ಮಹಿಳೆಯರಿಗೆ ಅವಳಿ ಮಕ್ಕಳು ಹುಟ್ಟುವ ಅವಕಾಶ ಹೆಚ್ಚಾಗಿ ಇರುತ್ತದೆ.

6. ಮಕ್ಕಳು ಆಗದಂತೆ ಬಳಸುವ ಬರ್ತ್ ಕಂಟ್ರೋಲ್ ಪಿಲ್ಸ್ ಒಮ್ಮೊಮ್ಮೆ ಮಹಿಳೆಯರು ನಿಲ್ಲಿಸಿದರೆ ಅಂತಹವರಿಗೆ ಒಂದೇ ಸಲ ಒಂದಕ್ಕಿಂತಲೂ ಹೆಚ್ಚು ಅಂಡಾಣು ಬಿಡುಗಡೆಯಾಗುವ ಅವಕಾಶ ಇರುತ್ತದೆ. ಇಂತಹ ಪರಿಸ್ಥಿತಿ ಯಾವ ಮಹಿಳೆಗಾದರೂ ಇದ್ದರೆ ಅಂತಹವರಿಗೆ ಅವಳಿ ಮಕ್ಕಳು ಹುಟ್ಟುವ ಅವಕಾಶ ಸಹ ಇರುತ್ತದೆ.

7. ಮಕ್ಕಳನ್ನು ಹೆಚ್ಚಾಗಿ ಹೆತ್ತ ಮಹಿಳೆಯರಿಗೆ ಅವಳಿಗಳು ಹುಟ್ಟುವ ಅವಕಾಶ ಇರುತ್ತದೆ ಎಂದು ಸಂಶೋಧನೆಗಳು ಹೇಳುತ್ತಿವೆ.

8. ಮಕ್ಕಳಿಗೆ ಮಹಿಳೆಯರು ಹೆಚ್ಚು ಕಾಲ ಹಾಲು ಕೊಟ್ಟರೆ ಅಂತಹವರಿಗೆ ಅವಳಿ ಮಕ್ಕಳು ಹುಟ್ಟುವ ಚಾನ್ಸ್ ಹೆಚ್ಚಾಗಿ ಇರುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ.

9. ಐವಿಎಫ್ ಪದ್ಧತಿಯಲ್ಲಿ ಅವಳಿಗಳನ್ನು ಪಡೆಯುವ ಚಾನ್ಸ್ ಸಹ ಇದೆಯಂತೆ. ಆದರೆ ಅದು ತುಂಬಾ ರಿಸ್ಕ್‌ನಿಂದ ಕೂಡಿದ ಕೆಲಸ.

10. ಫೋಲಿಕ್ ಆಸಿಡ್ ಹೆಚ್ಚಾಗಿ ಉತ್ಪತ್ತಿ ಆಗುವ ಮಹಿಳೆಯರಲ್ಲಿ, ಮಲ್ಟಿ ವಿಟಮಿನ್ ಟ್ಯಾಬ್ಲೆಟ್‌ಗಳನ್ನು ಹೆಚ್ಚಾಗಿ ಡೋಸ್‌ಗಳಲ್ಲಿ ಹಾಕಿಕೊಳ್ಳುವವರಲ್ಲಿ, ಹಾಲು, ಹಾಲಿನ ಉತ್ಪನ್ನಗಳನ್ನು ಹೆಚ್ಚಾಗಿ ತೆಗೆದುಕೊಳ್ಳುವ ಮಹಿಳೆಯರಲ್ಲಿ ಅವಳಿಗಳು ಹುಟ್ಟುವ ಅವಕಾಶ ಹೆಚ್ಚಾಗಿ ಇರುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ.

SHARE