ಗಂಡಸರು ಜಾಸ್ತಿ ನಗುತ್ತಾರಾ? ಹೆಂಗಸರು ಜಾಸ್ತಿ ನಗುತ್ತಾರಾ? ನಗುವುದರಿಂದ ಆಯುಸ್ಸು ಹೆಚ್ಚುತ್ತಾ?

ಆರೋಗ್ಯಕ್ಕೆ ನಗುವೇ ಆಯುಧ. ನಗುವುದರಿಂದ ಆಗುವ ಪ್ರಯೋಜನಗಳೇನು ಎಂದು ಗೊತ್ತಾದರೆ ಯಾರೇ ಆಗಲಿ ನಗದೆ ಇರುತ್ತಾರಾ..? ನಗು ಕೇವಲ ನಾಲ್ಕು ರೀತಿಯಲ್ಲಿ ಅಲ್ಲ ನಲವತ್ತು ರೀತಿಯಲ್ಲಿ ಗ್ರೇಟ್. ಮಾನಸಿಕವಾಗಿ, ದೈಹಿಕವಾಗಿ ಆರೋಗ್ಯವಾಗಿ ಇರಲು ನಗು ಎಲ್ಲಾ ರೀತಿಯಲ್ಲೂ ಸಹಕರಿಸುತ್ತದೆ. ಸುದೀರ್ಘಕಾಲ ಆರೋಗ್ಯ ಜೀವನಕ್ಕೆ ನಗು ಪ್ರಮುಖ ಪಾತ್ರ ಪೋಷಿಸುತ್ತದೆ. ಹುಸಿನಗೆಯಿಂದ ಕೆಲವು ಸ್ನಾಯುಗಳು ಮಾತ್ರ ಕೆಲಸ ಮಾಡುತ್ತವೆ. ಅದೇ ಮನಸ್ಫೂರ್ತಿಯಾಗಿ ನಗುವುದರಿಂದ ಹೆಚ್ಚಿನ ಸ್ನಾಯುಗಳು ಕೆಲಸ ಮಾಡುತ್ತವೆ. ನಗು ಎಂಬುದು ಜೀವನದಲ್ಲಿ ಪ್ರಮುಖ ಪಾತ್ರ ಪೋಷಿಸುತ್ತದೆ. ಇತರರ ಜತೆಗೆ ಸ್ನೇಹ ಪೂರ್ವಕ ವಾತಾವರಣವನ್ನು ಉಂಟು ಮಾಡುವಲ್ಲಿ ಪ್ರಮುಖ ಪಾತ್ರ ಪೋಷಿಸುತ್ತದೆ. ಇನ್ನು ಅಸಲಿ ವಿಷಯಕ್ಕೆ ಹೋದರೆ..

ಬೆಳಗ್ಗೆ ಎದ್ದು ವಾಕಿಂಗ್, ಜಾಗಿಂಗ್, ರನ್ನಿಂಗ್‌ನಂತಹ ವರ್ಕ್‌ಔಟ್‌ಗಳನ್ನು ಮಾಡಿದರೆ ಎಷ್ಟು ಫಲಿತಾಂಶ ಇರುತ್ತದೋ.. ಬೆಳಗ್ಗೆ ಒಂದು ಗಂಟೆ ಕಾಲ ಒಳ್ಳೆಯ ಹಾಸ್ಯರಸ ಚಿತ್ರ ನೋಡಿದರೂ ಅಷ್ಟೇ ಪ್ರತಿಫಲ ಸಿಗುತ್ತದೆ ಎಂದು ಅಮೆರಿಕಾದಲ್ಲಿನ ಮೇರಿಲ್ಯಾಂಡ್ ಮೆಡಿಕಲ್ ಸೆಂಟರ್ ಯೂನಿವರ್ಸಿಟಿಯ ಸಂಶೋಧಕರು ಕಂಡುಹಿಡಿದಿದ್ದಾರೆ. ಆರೋಗ್ಯವಂತರಾದ 20 ಮಂದಿ ಮೇಲೆ ಕೆಲವು ದಿನಗಳ ಕಾಲ ಸಂಶೋಧನೆ ಮಾಡಿ ಈ ವಿಚಾರವನ್ನು ಕಂಡುಕೊಂಡಿದ್ದಾರೆ. ಹಾಗಿದ್ದರೆ ಗಂಡಸರು ಹೆಚ್ಚು ನಗುತ್ತಾರಾ? ಹೆಂಗಸರು ಹೆಚ್ಚು ನಗುತ್ತಾರಾ? ಎಂಬ ವಿಷಯದ ಬಗ್ಗೆ ಡಾಕ್ಟರ್ ಮೋರಾ ರಿಪೋಲ್ ಎಂಬ ಸಂಶೋಧಕ ಕಂಡುಹಿಡಿದಿದ್ದಾನೆ. ಸ್ಪ್ಯಾನಿಷ್ ಪತ್ರಿಕೆಯಾದ ರಿವಿಸ್ತಾ ಕ್ಲಿನಿಕಾ ಎಸ್ಸನೋಲಾ ಎಂಬ ಪತ್ರಿಕೆಯಲ್ಲಿ ಪ್ರಕಟಿಸಿದ ಸಂಶೋಧನಾ ಪ್ರಬಂಧದಲ್ಲಿ ಹೆಂಗಸರು ಗಂಡಸರಿಗಿಂತ ಹೆಚ್ಚು ನಗುತ್ತಾರಂತೆ.

Related image

ಹಾಗಾಗಿಯೇ ಗಂಡಸರ ಮಾನಸಿಕ ಆರೋಗ್ಯ, ಮಾನಸಿಕ ಬೆಳವಣಿಗೆಗೆ ಹೋಲಿಸಿದರೆ ಹೆಂಗಸರು ಮುಂದಿರುತ್ತಾರೆ ಎಂದು ತಿಳಿಸಿದ್ದಾರೆ. ಮನಸ್ಫೂರ್ತಿಯಿಂದ ನಗುವವರು ಹೆಚ್ಚು ಕಾಲ ಜೀವಿಸುತ್ತಾರಾ? ನಗು ಆಯಸ್ಸನ್ನು ಹೆಚ್ಚಿಸುತ್ತಾ? ಎಂಬ ಅನೇಕ ಕೋನಗಳಲ್ಲಿ ಹಲವು ಸಂಶೋಧನೆಗಳು ಸಹ ಕುತೂಹಲಕರ ಅಂಶಗಳನ್ನು ಹೊರಹಾಕಿವೆ. ಆರೋಗ್ಯಕರವಾದ ಮನುಷ್ಯ ಪ್ರಸ್ತುತ ಆಯಸ್ಸಿನ ಪ್ರಕಾರ 72 ವರ್ಷಗಳ ಕಾಲ ಜೀವಿಸುತ್ತಾನೆ. ಆಗಾಗ ನಗುವವರು 75 ವರ್ಷ, ನಿತ್ಯ ಹಾಯಾಗಿ, ನಗುತ್ತಾ ಇರುವವರು 79 ವರ್ಷ ಬದುಕುತ್ತಾರೆಂದು ಸಂಶೋಧನೆಗಳು ಹೇಳುತ್ತಿವೆ. ಅಂದರೆ ಹಾಸ್ಯದಿಂದ ಜೀವಿಸಿದರೆ ಆಯಸ್ಸಿನ ಪ್ರಮಣಕ್ಕಿಂತ… ಏಳು ವರ್ಷ ಹೆಚ್ಚು ಬದುಕಬಹುದು ಎಂದಂತಾಯಿತು.

SHARE