ತೀರ್ಥ ಸೇವಿಸಿದ ಬಳಿಕ ಕೈಯನ್ನು ಯಾಕೆ ತಲೆಗೆ ಸವರಿಕೊಳುತ್ತಾರೆ..?

ನಾವು ದೇವಾಲಯಗಳಿಗೆ ಹೋದಾಗ ಕೆಲವು ಕಡ್ಡಾಯವಾಗಿ ಪಾಲಿಸಬೇಕಾದ ಆಚಾರಗಳಿವೆ. ಅದರಲ್ಲಿ ಬಹಳಷ್ಟು ಮಂದಿ ತೀರ್ಥ ಸೇವನೆ ಬಳಿಕ ಕೈಯನ್ನು ತಲೆಗೆ ಸವರಿಕೊಳ್ಳುತ್ತಾರೆ. ಹಾಗಿದ್ದರೆ ಇದು ಆಚಾರದ ಭಾಗವೇ? ಇಷ್ಟಕ್ಕೂ ಈ ರೀತಿ ಮಾಡಬೇಕೆಂದು ಶಾಸ್ತ್ರಗಳಲ್ಲಿ ಇದೆಯೇ? ಇದರ ಹಿಂದೆ ಇರುವ ಅಸಲಿ ಕಾರಣ ಏನು ಎಂಬುದನ್ನು ನಾವೀಗ ತಿಳಿದುಕೊಳ್ಳೋಣ..!

Image result for Meenakshi Amman Temple

ನಾವು ಗುಡಿಯ ಹೊರಗೆ ಚಪ್ಪಲಿ ಬಿಟ್ಟು ಕಾಲನ್ನು ನೀರಿನಿಂದ ತೊಳೆದುಕೊಂಡು ಗುಡಿಯೊಳಗೆ ಪ್ರವೇಶಿಸುತ್ತೇವೆ. ಇನ್ನು ಗರ್ಭಗುಡಿಯಲ್ಲಿ ದೇವರ ದರ್ಶನಕ್ಕೆ ಮೊದಲು ಪ್ರದಕ್ಷಿಣೆ ಮಾಡಿ ಆ ಬಳಿಕ ಮನಸ್ಸಿನ ಬಯಕೆಗಳನ್ನು ದೇವರಲ್ಲಿ ಬೇಡಿಕೊಳ್ಳುತ್ತೇವೆ. ದೇವರ ದರ್ಶನದ ಬಳಿಕ ಪೂಜಾರಿ ಮಂಗಳಾರತಿ ಕೊಟ್ಟ ಮೇಲೆ ಸ್ವಾಮಿಯ ತೀರ್ಥ ಪ್ರಸಾದ ವಿನಿಯೋಗವಾಗುತ್ತದೆ. ನಾವು ತೀರ್ಥ ತೆಗೆದುಕೊಳ್ಳಲು ಕೈಯನ್ನು ಗೋಕರ್ಣ ಭಂಗಿಯಲ್ಲಿ ಇಟ್ಟು ತೆಗೆದುಕೊಳ್ಳುತ್ತೇವೆ. ಆ ಬಳಿಕ ನಮಗೆ ಗೊತ್ತಿಲ್ಲದಂತೆ ನಾವು ಆ ಕೈಯನ್ನು ತಲೆಗೆ ಸವರಿಕೊಳ್ಳುತ್ತೇವೆ. ಈ ರೀತಿ ಮಾಡುವುದು ಸರಿಯಲ್ಲ ಎನ್ನುತ್ತಾರೆ.

ಈ ರೀತಿ ಮಾಡಬಾರದು ಎಂದು ಯಾಕೆ ಹೇಳುತ್ತಾರೆ ಎಂದರೆ, ತೀರ್ಥ ಎಂಬುದು ಪಂಚಾಮೃತದಿಂದ ಮಾಡುತ್ತಾರೆ. ಅದರಲ್ಲಿ ಇರುವ ಜೇನು, ಸಕ್ಕರೆಯಂತಹವು ಕೂದಲಿಗೆ ಒಳ್ಳೆಯದಲ್ಲ. ಅಷ್ಟೇ ಅಲ್ಲದೆ ತುಳಸಿ ತೀರ್ಥ ತೆಗೆದುಕೊಂಡಾಗಲೂ ತಲೆಗೆ ಸವರಿಕೊಳ್ಳಬಾರದು. ಯಾಕೆಂದರೆ ತುಳಸಿ ತೀರ್ಥ ತೆಗೆದುಕೊಳ್ಳುವುದರಿಂದ ಕೈ ಎಂಜಲಾಗಿರುತ್ತದೆ. ಎಂಜಲು ಕೈಯನ್ನು ತಲೆಗೆ ಹಚ್ಚಿಕೊಳ್ಳಬಾರದು.

ವೈಷ್ಣವ ಸಂಪ್ರದಾಯದಲ್ಲಿ ಮಾತ್ರ ಗಂಗಾ ಜಲದಲ್ಲಿ ಅಭಿಷೇಕ ಮಾಡಿದ ತೀರ್ಥವನ್ನು ಮಾತ್ರ ತಲೆಯ ಹಿಂಭಾಗಕ್ಕೆ ಸವರಿಕೊಳ್ಳಬಹುದು ಎಂಬ ಸಂಪ್ರದಾಯ ಇದೆ. ಇನ್ನು ಬೇರೆ ಯಾವುದೇ ತೀರ್ಥ ತೆಗೆದುಕೊಂಡರೂ ಕೈಯನ್ನು ಸಾಮಾನ್ಯವಾಗಿ ನೀರಿನಿಂದ ಸ್ವಚ್ಛಗೊಳಿಸಿಕೊಳ್ಳಬೇಕು ಎನ್ನುತ್ತಾರೆ.

SHARE