ಪತ್ನಿ ದಪ್ಪ ಇದ್ದರೆ ಪಾಪ ಆ ಗಂಡನ ಪರಿಸ್ಥಿತಿ ಅಷ್ಟೇ ಅಂತೆ!! ಯಾಕೆ ಗೊತ್ತಾ ….!

ಪತ್ನಿಯರು ದಪ್ಪಗೆ ಇದ್ದರೆ ಗಂಡಂದಿರು ಡಯಾಬಿಟೀಸ್‌ಗೆ ತುತ್ತಾಗುವ ಸಾಧ್ಯತೆಗಳು ಜಾಸ್ತಿ ಇವೆಯಂತೆ. ಕೇಳಲು ವಿಚಿತ್ರ ಅನ್ನಿಸಿದರೂ ಇದು ನಿಜ. ಮಹಿಳೆಯರು ಹೆಚ್ಚಾಗಿ ತಿನ್ನಲು ಇಷ್ಟಪಡುತ್ತಿದ್ದರೆ… ಅವರ ಗಂಡಂದಿರ ಆರೋಗ್ಯಕ್ಕೆ ಅಪಾಯ ಇದ್ದಂತೆ ಒಂದು ಸಂಶೋಧನೆಯೊಂದು ಅಚ್ಚರಿ ಎಂಬ ವಿಷಯವನ್ನು ಹೇಳಿದೆ.

ಪತ್ನಿಯರು ಸ್ಥೂಲಕಾಯ ಸಮಸ್ಯೆಯಿಂದ ನರಳುತ್ತಿದ್ದರೆ… ನಡುವಯಸ್ಸಿನ ಪುರುಷರಲ್ಲಿ ಟೈಪ್ 2 ಡಯಾಬಿಟೀಸ್ ಬರುವ ಸಾಧ್ಯತೆಗಳು ಹೆಚ್ಚು ಎಂದು ಅಧ್ಯಯನ ಒಂದು ತಿಳಿಸಿದೆ. ಗಂಡಂದಿರುವ ದಪ್ಪ ಇದ್ದರೆ ಆ ಪ್ರಭಾವ ಪತ್ನಿಯರ ಮೇಲೆ ಮಾತ್ರ ಇರಲ್ಲ ಎಂದು ಅಧ್ಯಯನ ಹೇಳಿದ್ದು ವಿಚಿತ್ರ ಅನ್ನಿಸುತ್ತದೆ. ಅದಕ್ಕಾಗಿ ಅವರು ಕಂಡುಹಿಡಿದಿರುವುವಾಗಿ ಹೇಳಿರುವ ಕಾರಣಗಳು ಸಹ ನಾವು ಕೇಳದಂತಹವು. ಅವೇನೆಂದರೆ…

ಆಹಾರಾಭ್ಯಾಸಗಳು ಚೆನ್ನಾಗಿ ಇಲ್ಲದಿದ್ದರೆ, ದೈಹಿಕ ಶ್ರಮ ಅಷ್ಟಾಗಿ ಇಲ್ಲದಿರುವುದು ಇದಕ್ಕೆ ಕಾರಣ ಎಂದು ಸಂಶೋಧನೆಗಳು ಭಾವಿಸುತ್ತಿವೆ. ದಪ್ಪಗೆ ಇರುವ ಮಹಿಳೆಯರು ತಮ್ಮ ಗಂಡಂದಿರ ಆಹಾರ ಅಭ್ಯಾಸ, ಇತರೆ ಕಾರ್ಯಕಲಾಪಗಳನು ಪ್ರಭಾವಿಸುತ್ತವೆ. ಗಂಡಂದಿರ ಜೀವನ ಶೈಲಿ ಮೇಲೆ ಪತ್ನಿಯರ ಪ್ರಭಾವ ಹೆಚ್ಚು ಇರುತ್ತದೆ ಎಂದು ಈ ಸಂಶೋಧನೆ ತಿಳಿಸಿದೆ. ಅಡುಗೆ ಮಾಡುವ ಜವಾಬ್ದಾರಿ ಮಹಿಳೆಯರ ಮೇಲೆ ಇಲ್ಲ ಎಂದರೆ ಅವರು ತಮ್ಮ ಬಗ್ಗೆ ಹೆಚ್ಚು ಮುತುವರ್ಜಿ ತೋರುತ್ತಿರುವುದೇ ಇದಕ್ಕೆ ಕಾರಣ ಇರಬಹುದು ಎಂದು ಸಂಶೋಧಕರು ಭಾವಿಸಿದ್ದಾರೆ.

ಆರ್ಹಸ್ ಯೂನಿವರ್ಸಿಟಿಯ ಆಡಮ್ ಹಲ್ಮನ್ ಈ ಸಂಶೋಧನೆಯ ನೇತೃತ್ವ ವಹಿಸಿದ್ದರು. ಪೋರ್ಚುಗಲ್‍ನಲ್ಲಿ ನಡೆದ ಯೂರೋಪಿಯನ್ ಅಸೋಸಿಯೇಷನ್ ಫರ್ ದಿ ಸ್ಟಡಿ ಆಫ್ ಡಯಾಬಿಟೀಸ್ ವಾರ್ಷಿಕ ಸಮಾವೇಶದಲ್ಲಿ ಈ ಫಲಿತಾಂಶಗಳು ಹೊರಬಿದ್ದಿವೆ. ಹಾಗಾಗಿ ನಿಮ್ಮ ಪತ್ನಿ ಅಧಿಕ ತೂಕದಿಂದ ಇದ್ದರೆ ನನಗೇನು ಬಿಡು ಎಂಬ ಗಂಡಂದಿರು ಇನ್ನು ಹುಷಾರಾಗಿಬೇಕು.. ಅವರು ತಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳುವಲ್ಲಿ ಗಂಡಂದಿರ ಸಹಕಾರ ಸಹ ಅಗತ್ಯ.

SHARE